ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಪರಿಚಯ

ಶಿವಮೊಗ್ಗ ಎಂಬ ಹೆಸರು 'ಶಿವ-ಮುಖ' ಎಂಬ ಪದಪುಂಜದಿಂದ ಬಂದದ್ದು. ಇನ್ನೊಂದು ವ್ಯುತ್ಪತ್ತಿಯಂತೆ ಇದು 'ಸಿಹಿ-ಮೊಗೆ' (ಸಿಹಿಯಾದ ಮೊಗ್ಗು) ಎಂದಿದ್ದು ಅದು 'ಶಿವಮೊಗ್ಗ'ವಾಗಿ ಮಾರ್ಪಾಟುಹೊಂದಿದೆ.ಈ ಪ್ರದೇಶವು ಕ್ರಿ.ಪೂ. 3ನೇ ಶತಮಾನದಲ್ಲಿ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ದಕ್ಷಿಣದ ತುದಿಯಾಗಿದ್ದಿತು. ಮುಂದಿನ ಶತಮಾನಗಳಲ್ಲಿ ಅನೇಕ ರಾಜಮನೆತನಗಳ ಆಳ್ವಿಕೆಯಲ್ಲಿ ಈ ಪ್ರದೇಶ ಇದ್ದಿತು: 4ನೇ ಶತಮಾನದಲ್ಲಿ ಕದಂಬರು, 6ನೇ ಶತಮಾನದಲ್ಲಿ ಚಾಲುಕ್ಯರು ಮತ್ತು ಅವರ ಸಾಮಂತರಾದ ಗಂಗರು, 8ನೇ ಶತಮಾನದಲ್ಲಿ ರಾಷ್ಟ್ರಕೂಟರು, 11ನೇಯದರಲ್ಲಿ ಹೊಯ್ಸಳರು ಮತ್ತು ೧೫ನೇ ಶತಮಾನದಲ್ಲಿ ವಿಜಯನಗರದ ಅರಸರು ಈ ಪ್ರದೇಶವನ್ನು ಆಳಿದೆ ರಾಜಮನೆತನಗಳಲ್ಲಿ ಪ್ರಮುಖರು. ಶಿವಮೊಗ್ಗ ನಗರಕ್ಕೆ ಸ್ವತಂತ್ರ ವ್ಯಕ್ತಿತ್ವ ಬಂದದ್ದು 16ನೇ ಶತಮಾನದ ಕೆಳದಿ ನಾಯಕರ ಆಳ್ವಿಕೆಯಲ್ಲಿ. ೧೭ನೇ ಶತಮಾನದ ನಂತರ ಭಾರತ ಸ್ವಾತಂತ್ರ್ಯದ ವರೆಗೂ ಶಿವಮೊಗ್ಗ ಮೈಸೂರು ಸಂಸ್ಥಾನದ ಭಾಗವಾಗಿತ್ತು.

ಜಲಪಾತಗಳು, ಅಣೆಕಟ್ಟುಗಳು ಮತ್ತು ಪ್ರವಾಸೀ ತಾಣಗಳು :-

ಜೋಗದ ಜಲಪಾತ - ಚಂದ್ರಗುತ್ತಿ  ಶ್ರೀ ರೇಣುಕಾಂಬ ದೇವಸ್ಥಾನ ಮತ್ತು ಕೋಟೆ - ​​ 12ನೇ ಶತಮಾನದ ಲಕ್ಷ್ಮೀ ನರಸಿಂಹ ಸ್ವಾಮೀ ದೇವಸ್ಥಾನ, ಭದ್ರಾವತಿ - ಲಿಂಗನಮಕ್ಕಿ ಅಣೆಕಟ್ಟು - ಒನಕೆ ಅಬ್ಬೆ ಜಲಪಾತ - ಭದ್ರಾ ನದಿ ಯೋಜನೆ, ಲಕ್ಕವಳ್ಳಿ - ತು೦ಗಾ ನದಿ ಯೋಜನೆ, ಗಾಜನೂರು ಅಣೆಕಟ್ಟು – ಆಗುಂಬೆ -ಮಂಡಗದ್ದೆ ಪಕ್ಷಿಧಾಮ - ಅ೦ಬುತೀರ್ಥ, ಶರಾವತಿಯ ಉಗಮ ಸ್ಥಾನ - ಕು೦ದಾದ್ರಿ ಬೆಟ್ಟ - ಕುಪ್ಪಳ್ಳಿಯ ಕವಿಶೈಲ - ಕೋಟೆ ಶ್ರೀ ಸೀತಾರಾಮಾ೦ಜನೇಯ ಸ್ವಾಮಿ ದೇವಸ್ಥಾನ, ಶಿವಮೊಗ್ಗ - ಕೂಡ್ಲಿ - ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಆಗುವ ಸ್ಠಳ - ಹಿಡ್ಲುಮನೆ ಜಲಪಾತ (ನಿಟ್ಟೂರು) - ಸಿರಿಮನೆ ಜಲಪಾತ - ದಬ್ಬೆ ಜಲಪಾತ - ಚೀಲನೂರು ಗ್ರಾಮದ ಜೋಗದ ಜಲಪಾತ - ಕೊಡಚಾದ್ರಿ ಬೆಟ್ಟ - ಶಿವಪ್ಪನಾಯಕನ ಕೋಟೆ (ಬಿದನೂರು ನಗರ) – ಸಿಗಂದೂರು - ತಾವರೆ ಕೊಪ್ಪದ ಸಿಂಹ ಧಾಮ - ಚೀಲನೂರು ಸೊರಬ ತಾಲ್ಲೂಕು - ಸೊರಬ ತಾಲ್ಲೂಕಿನಲ್ಲಿರುವ ಗುಡವಿ ಪಕ್ಷಿಧಾಮ  (ಕರ್ನಾಟಕದ ೨ನೇ ಅತಿದೊಡ್ಡ ಪಕ್ಷಿಧಾಮ) - ಕಾಗೋಡು ಸತ್ಯಾಗ್ರಹ, ಉಳುವವನೇ ಭೂಮಿಯ ಒಡೆಯ ಮುಂತಾದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಹೋರಾಟದ ಭೂಮಿಯಾದ ಸಾಗರವು ಇತಿಹಾಸ ಪ್ರಸಿದ್ಧವಾಗಿದೆ. 

ಚರಿತ್ರೆ ಮತ್ತು ಧರ್ಮ :-

  • ಕೆಳದಿ-ಇಕ್ಕೇರಿ, ಕೆಳದಿ ನಾಯಕರ ರಾಜಧಾನಿಗಳು. ಸಾಗರ ತಾಲ್ಲೂಕು
  • ನಗರ, ಬಿದನೂರು ಸಂಸ್ಥಾನದ ರಾಜಧಾನಿ
  • ಬಳ್ಳಿಗಾವಿಯ ಕೇದಾರೇಶ್ವರ ದೇವಾಲಯ
  • ಶಿವಪ್ಪ ನಾಯಕನ ಅರಮನೆ
  • ಸೇಕ್ರೆಡ್ ಹಾರ್ಟ್ ಚರ್ಚ್, ಭಾರತದಲ್ಲಿ ಎರಡನೆ ಅತಿ ದೊಡ್ಡ ಚರ್ಚ್
  • ಕವಲೇದುರ್ಗದ ಕೋಟೆ, ಕೆಳದಿ ಸಂಸ್ಥಾನದ ರಾಜಧಾನಿ. ಈಗ ಕೋಟೆಯ ಪಳಯುಳಿಕೆ ಮಾತ್ರ ಇದೆ.
  • ತೀರ್ಥಹಳ್ಳಿ ತಾಲ್ಲೂಕಿನ ಬೆಟ್ಟಬಸರವಾನಿ ಮತ್ತು ಮರಹಳ್ಳಿ ಗ್ರಾಮಗಳಲ್ಲಿ ಜೈನ ಸಂಪ್ರದಾಯದ ಪಳಿಯುಳಿಕೆ ಇವೆ.
  • ಹೊಸನಗರ ತಾಲ್ಲೂಕಿನ ಹುಂಚ ಗ್ರಾಮದಲ್ಲಿ ಜೈನ ಸಂಪ್ರದಾಯದ ಮಠ ಮತ್ತು ಪದ್ಮಾವತಿ ದೇವಿಯ ದೇವಸ್ಥಾನವಿದೆ
  • ಹಣಗೇರೆಕಟ್ಟೆ ಹಿಂದು ಮುಸ್ಲಿಂ ಧರ್ಮಗಳ ಪವಿತ್ರ ಸ್ಥಳವಾಗಿದೆ.
  • ನಾಡಕಲಸಿ ಸಾಗರ ತಾಲ್ಲೂಕು; ಪ್ರಾಚೀನ ದೇವಾಲಯ
  • ಉರುಗನಹಳ್ಳಿ- ಸೊರಬ ತಾಲ್ಲೂಕು - ಶಿವಮೊಗ್ಗ ಜಿಲ್ಲಾ, ಹಿಂದೂ ಮುಸ್ಲಿಂ ಭಾವೈಕ್ಯತೆಯ ಕೇಂದ್ರ
  • ತವನಂದಿ- ಸೊರಬ ತಾಲ್ಲೂಕು - ಕದಂಬರ ಕಾಲದ ಕೋಟೆ
  • ಮೃಗವಧೆ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ,ತೀರ್ಥಹಳ್ಳಿ ಬಳಿ. ಶ್ರೀರಾಮನು ಚಿನ್ನದ ಜಿಂಕೆಯ ರೂಪದಲ್ಲಿ ಬಂದ ಮಾರೀಚನನ್ನು ವಧೆ ಮಾಡಿದ ಸ್ಥಳ.

 

ಕುವೆಂಪು ವಿಶ್ವವಿದ್ಯಾನಿಲಯ :-

ಕುವೆಂಪು ವಿಶ್ವವಿದ್ಯಾನಿಲಯವು ಶಿವಮೊಗ್ಗದಿ೦ದ 27 ಕಿ.ಮಿ, ಶಿವಮೊಗ್ಗದಿಂದ ಭದ್ರಾ ಅಣೆಕಟ್ಟೆಗೆ (ಬಿ.ಆರ್.ಪಿ) ಗೆ ಹೋಗುವ ಮಾರ್ಗದಲ್ಲಿ ಶಂಕರಘಟ್ಟದಲ್ಲಿದೆ. ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಸಾಹಿತಿ ಕೆ. ವಿ. ಪುಟ್ಟಪ್ಪ (ಕುವೆಂಪು) ರವರ ಸ್ಮರಣಾರ್ಥವಾಗಿ ಈ ವಿಶ್ವ ವಿದ್ಯಾನಿಲಯಕ್ಕೆ ಅವರ ಹೆಸರನ್ನು ಇಡಲಾಗಿದೆ. 

ಗಿರಿ-ಶಿಖರಗಳು :-

ಆಗುಂಬೆ, ಸೂರ್ಯಾಸ್ತಕ್ಕೆ ವಿಶ್ವಪ್ರಸಿದ್ದ – ಕೊಡಚಾದ್ರಿ - ಕುಂದಾದ್ರಿ ಬೆಟ್ಟ. ಜೈನ ಕ್ಷೇತ್ರ - ಬರೆಕಲ್ ಬತೆರಿ - ನಿಶಾನೆ ಗುಡ್ಡ – ಹೆದ್ದಾರಿಖಾನ್ - ಮೊಳಕಾಲ್ಮುರಿ ಗುಡ್ಡ - ಜೊಗಿ ಗುಡ್ಡ - ಮುಪ್ಪಾನೆ

ನದಿಗಳು :-

ತುಂಗಾ – ಭದ್ರಾ – ಶರಾವತಿ – ಕುಮುದ್ವತಿ – ವೇದಾವತಿ - ವರದ ನದಿ – ಕುಶಾವತಿ - ದ೦ಡಾವತಿ ನದಿ – ಮಾಲತಿ -ಸೀತಾ 

ವನ್ಯಜೀವಿ : 

  • ತಾವರೆಕೊಪ್ಪ, ಹುಲಿ ಮತ್ತು ಸಿಂಹಧಾಮ
  • ಸಕ್ಕರೆಬೈಲು, ಆನೆ ತರಬೇತಿ ಶಿಬಿರ
  • ಮಂಡಗದ್ದೆ ಪಕ್ಷಿಧಾಮ, ಕುಕ್ಕನ ಗುಡ್ಡಾ, ಗುಡವಿ
  • ಸೊರಬ ತಾಲ್ಲೂಕಿನ ಚೀಲನೂರು ಕಾಡು ನವಿಲುಗಳ ವಾಸಸ್ಥಾನ

ಐತಿಹಾಸಿಕ ವ್ಯಕ್ತಿಗಳು :

  • ಕೆಳದಿಯ ಚೆನ್ನಮ್ಮಾಜಿ
  • ಅಲ್ಲಮಪ್ರಭು ದೇವರು
  • ಕೆಳದಿ ಶಿವಪ್ಪ ನಾಯಕ
  • ಅಕ್ಕಮಹಾದೇವಿ, [ ಉಡುತಡಿ ,ಶಿಕಾರಿಪುರ ತಾಲ್ಲೂಕು,ಶಿವಮೊಗ್ಗ ಜಿಲ್ಲೆ]

  ಪ್ರಮುಖ ವ್ಯಕ್ತಿಗಳು :

  • ರಾಷ್ಟ್ರಕವಿ ಕುವೆಂಪು, ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಮತ್ತು ಲೇಖಕ.
  • ಡಾ.ಎಸ್.ಆರ್. ರಾವ್ (ಶಿಕಾರಿಪುರ ರಂಗನಾಥ ರಾವ್) ಭಾರತದ ಹೆಸರಾಂತ ಪ್ರಾಚ್ಯ ವಸ್ತು ತಜ್ಞ
  • ಯು ಆರ್ ಅನಂತಮೂರ್ತಿ, ಕನ್ನಡ ಲೇಖಕರು ಹಾಗು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
  • ಪಿ.ಲಂಕೇಶ್, ಲೇಖಕ-ಪತ್ರಕರ್ತರು
  • ನಾ. ಡಿಸೋಜ, ಸಾಹಿತಿ
  • ಎಮ್.ಕೆ. ಇ೦ದಿರ, ಕಾದ೦ಬರಿಕಾರ್ತಿ
  • ಕೆ.ವಿ.ಸುಬ್ಬಣ್ಣ, ಸಾಹಿತಿ ಮತ್ತು ನಾಟಕಕಾರ
  • ಜಿ. ಎಸ್. ಶಿವರುದ್ರಪ್ಪ, ಕರ್ನಾಟಕದ ರಾಷ್ಟ್ರಕವಿ
  • ಎನ್ ಎಸ್ ಲಕ್ಷ್ಮಿನಾರಾಯಣ ಭಟ್ಟ, ಪ್ರಸಿದ್ದ ಕವಿ
  • ಗಿರೀಶ್ ಕಾಸರವಳ್ಳಿ, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ
  • ಡಾ.ಟಿ.ಎಂ.ಶಿವಾನಂದಯ್ಯ ಹಿರಿಯ ಆಯುರ್ವೇದ ವೈದ್ಯರು
  • ಹೊ.ಅ.ನರಸಿಂಹ ಮೂರ್ತಿ ಅಯ್ಯಂಗಾರ್,ಮಾಜಿ-ರಾಜ್ಯ ರ್ಕಾರ್ಯದರ್ಶಿಗಳು,ವಿಶ್ವ ಹಿಂದೂ ಪರಿಷತ್.
  • ಅಭಿನಯ ಚಕ್ರವರ್ಥಿ, ಕಿಚ್ಚ ಸುದೀಪ್, ಖ್ಯಾತ ಚಲನಚಿತ್ರ ನಟ

 ತಾಲ್ಲೂಕುಗಳು  ಜನಸಂಖ್ಯೆ :

  • 2011 ರ ಜನಗಣತಿ
  • ಶಿವಮೊಗ್ಗ ಜಿಲ್ಲಾ ಜನ ಸಂಖ್ಯಾ ವಿವರ
  • ತಾಲ್ಲೂಕು

    ಸಾಕ್ಷರತೆ ಪ್ರಮಾಣ (%)

    ಒಟ್ಟು (2011)

    ಗಂಡಸರು

    ಹೆಂಗಸರು/ಪ್ರಮಾಣ

    ರ2001 ರ ಗಣತಿ

    ಶಿವಮೊಗ್ಗ ಜಿಲ್ಲೆ

    74.89

    17,55,512

    8,79,817

    8,75,695/995

    ಲಭ್ಯವಿಲ್ಲ

    ಶಿವಮೊಗ್ಗ ತಾಲ್ಲೂಕು

    77

    5,07,083

    2,55,317

    251761/969

    4,45,192

    ಭದ್ರಾವತಿ ತಾಲ್ಲೂಕು

    77

    3,39,930

    1,70,291.

    1,69,636/997

    3,38,989

    ಭದ್ರಾವತಿ ನಗರ

    --

    1,50,776

    ಲಭ್ಯವಿಲ್ಲ

    ಲಭ್ಯವಿಲ್ಲ

    1,60,662

    ತೀರ್ಥಹಳ್ಳಿ

    83.05

    1,41,453

    69,593

    71,869/1038

    1,43,207

    ಶಿವಮೊಗ್ಗ ಗ್ರಾಮೀಣ

    --

    1,26,916

    ಲಭ್ಯವಿಲ್ಲ

    ಲಭ್ಯವಿಲ್ಲ

    1,28,399

    ಸಾಗರ

    81.00

    2,06,112

    1,02,276

    1,03,834/1012

    2,00,995

    ಹೊಸನಗರ

    81.5

    1,18,148

    58,503

    59,645/1037

    1,15,000

    ಶಿಕಾರಿಪುರ

    76.5

    2,41,943

    1,22,527 1,

    19,413/980

    2,13,590

    ಸೊರಬ

    77

    2,00,843

    1,01,297

    91,546/999

    1,85,572

ಶಿವಮೊಗ್ಗ ಡಯಟ್ ಒಂದು ಪರಿಚಯ

       1992 ರಲ್ಲಿ ಉನ್ನತೀಕರಣಗೊಂಡು 18-01-1993 ರಿಂದ ಕಾರ್ಯಾರಂಭವಾದ ಶಿವಮೊಗ್ಗದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಇಂದು ಕರ್ನಾಟಕದಲ್ಲೇ ಒಂದು ಹೆಸರು ಪಡೆದ ಸಂಸ್ಥೆಯಾಗಿದೆ. ಈ ಡಯಟ್ಟಿನಲ್ಲಿ ಈ ವರೆಗೆ 30 ಪ್ರಾಂಶುಪಾಲರು ಕಾರ್ಯ ನಿರ್ವಹಿಸಿದ್ದಾರೆ. ಪ್ರತಿಯೊಬ್ಬರ  ಅವಧಿಯಲ್ಲೂಪ್ರಗತಿ ಸಾಧಿಸುತ್ತಾ ಇಂದು ಅತ್ಯುನ್ನತ ಮಟ್ಟಕ್ಕೆ ತಲುಪಿದೆ. ಈ ಡಯಟ್ಟಿನಲ್ಲಿ ಎಲ್ಲಾ ಮೂಲ ಸೌಲಭ್ಯಗಳಿದ್ದು, ಇರುವ ಎಲ್ಲಾ ಹಿರಿಯ ಉಪನ್ಯಾಸಕರು, ಉಪನ್ಯಾಸಕರು ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ಲಿಪಿಕ ನೌಕರರೂ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

       ಸದರಿ ಡಯಟ್ಟಿನಲ್ಲಿ ಒಟ್ಟು 50 ಹುದ್ದೆಗಳು ಮಂಜೂರಾಗಿದ್ದು, ಇದರಲ್ಲಿ 27 ಪುರುಷರೂ ಮತ್ತು 17 ಮಹಿಳೆಯರೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1 ಉಪನ್ಯಾಸಕರ ಹುದ್ದೆ, 1 ವೃತ್ತಿ ಶಿಕ್ಷಕರ ಹುದ್ದೆ, 1 ಸ್ಟೆನೊ ಮತ್ತು 3 ಗ್ರೂಪ್ ಡಿ ಹುದ್ದೆಗಳು ಖಾಲಿ ಇವೆ. ಕೆಲಸ ನಿರ್ವಹಿಸುತ್ತಿರುವ 44 ಅಧಿಕಾರಿ ಮತ್ತು ಸಿಬ್ಬಂದಿಯವರಲ್ಲಿ ಒಬ್ಬರು ಪ್ರಾಂಶುಪಾಲರು, 7 ಜನ ಹಿರಿಯ ಉಪನ್ಯಾಸಕರು, 16 ಜನ ಉಪನ್ಯಾಸಕರು, 17 ಜನ ಲಿಪಿಕ ನೌಕರರು, ಒಬ್ಬರು ಡ್ರೈವರ್, 3 ಜನ ‘ಡಿ’ ದರ್ಜೆ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

       ಡಯಟ್ಟಿನಲ್ಲಿ ಮೂರು ಕಟ್ಟಡಗಳಿದ್ದು, ಎಲ್ಲಾ ಸುವ್ಯವಸ್ಥೆಯನ್ನು ಹೊಂದಿದೆ. ಪ್ರಧಾನ ಕಟ್ಟಡದಲ್ಲಿ ಪ್ರತ್ಯೇಕವಾಗಿ ಪ್ರಾಂಶುಪಾಲರ, ಉಪ ಪ್ರಾಂಶುಪಾಲರ, ಹಿರಿಯ ಉಪನ್ಯಾಸಕರು ಮತ್ತು ಉಪನ್ಯಾಸಕರ ಹಾಗೂ ಲಿಪಿಕ ನೌಕರರ ಕೊಠಡಿಗಳಿವೆ. ಇದಲ್ಲದೆ ಎರಡು ಕಂಪ್ಯೂಟರ್ ಕೊಠಡಿ, ಭಾಷಾ ಲ್ಯಾಬ್, ಇಂಗ್ಲೀಷ್ ಕಾರ್ನರ್, ನಲಿ ಕಲಿ ಕೊಠಡಿ, ಟೆಲಿ ಕಾನ್ಫರೆನ್ಸ್ ಹಾಲ್  ಮತ್ತು ವಿಡಿಯೋ ಕಾನ್ಫರೆನ್ಸ್ ಹಾಲ್ ಇದೆ. ತರಬೇತಿ ನೀಡಲು ಅನುಕೂಲವಾಗುವಂತೆ ಎರಡು ಕೊಠಡಿಗಳಿಗೆ ಪ್ರೊಜೆಕ್ಟರ್ ಅಳವಡಿಸಿದೆ ಹಾಗೂ ಟೆಲಿ ಕಾನ್ಫರೆನ್ಸ್ ಹಾಲಿನಲ್ಲಿ ಸ್ಮಾರ್ಟ್ ಬೊರ್ಡ್ ನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಳವಡಿಸಲಾಗಿದೆ. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳಿವೆ. ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಫಿಲ್ಟರ್ ಅಳವಡಿಸಲಾಗಿದೆ. ಹಾಗೂ ಬೆಂಕಿ ನಂದಕಗಳನ್ನು (Fire Extinguisher) ಅಲ್ಲಲ್ಲಿ ಅಳವಡಿಸಲಾಗಿದೆ ಒಟ್ಟಿನಲ್ಲಿ ಎಲ್ಲಾ ಮೂಲ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ ಕಟ್ಟಡವಾಗಿದೆ.

       ಪಕ್ಕದಲ್ಲೇ ಇರುವ ಮತ್ತೊಂದು ಕಟ್ಟಡದಲ್ಲಿ ವಿಶಾಲವಾದ ಸಭಾಂಗಣವಿದೆ. ಇದರಲ್ಲಿ ಸುಮಾರು 150 ಜನರು ಕೂರಲು ಅವಕಾಶವಿದ್ದು ಪೀಠೋಪಕರಣಗಳನ್ನು ಅಳವಡಿಸಲಾಗಿದೆ. ಸಭಾಂಗಣಕ್ಕೆ ಹೊಂದಿಕೊಂಡಂತೆ ಪುರುಷ ಮತ್ತು ಮಹಿಳಾ ಶೌಚಾಲಯಗಳಿವೆ. ಪಕ್ಕದಲ್ಲೇ ಪಿ ಎಸ್ ಡಿ ಇ ವಿಭಾಗವಿದೆ. ಈ ವಿಭಾಗದ ಮುಖ್ಯಸ್ಥರು ಮತ್ತು ಉಪನ್ಯಾಸಕರಿಗೆ ಪ್ರತ್ಯೇಕ ಕೊಠಡಿ ಸೌಲಭ್ಯವಿದೆ. ತರಗತಿ ನಡೆಸಲು ಎರಡು ಕೊಠಡಿಗಳಿವೆ. ಇದರಲ್ಲೂ ತರಬೇತಿ ಮತ್ತು ತರಗತಿ ನಿರ್ವಹಣೆಗಾಗಿ ಪ್ರೊಜೆಕ್ಟರ್ ಅಳವಡಿಸಲಾಗಿದೆ. ಇದರ ಜೊತೆಗೆ 4 ವಿಶಾಲವಾದ ನಾಲ್ಕು ಕೊಠಡಿಗಳಿವೆ. ಈ ಕೊಠಡಿಗಳನ್ನು ತರಬೇತಿ ನೀಡಲು ಮತ್ತು ಪರೀಕ್ಷಾ ಕಾರ್ಯಕ್ಕಾಗಿ ಬಳಸಲಾಗುತ್ತಿದೆ. ಇದಕ್ಕೂ ಪ್ರತ್ಯೇಕವಾಗಿ ಶೌಚಾಲಯಗಳಿವೆ. ಇದಲ್ಲದೆ ಇದೇ ಕಟ್ಟಡದಲ್ಲಿ ಜಿಯೋ ಲ್ಯಾಬ್ ಕೂಡ ಇದೆ. ಇದು ಒಂದು ರೀತಿಯಲ್ಲಿ ಆಧುನಿಕ ವಸ್ತು ಸಂಗ್ರಹಾಲಯದಂತಿದೆ. ಇದರಲ್ಲಿ ಫ್ಲಾಷ್ ಲೈಟ್ ಮತ್ತು ಸೌಂಡ್ ಸಿಸ್ಟಂ ಅಳವಡಿಸಲಾಗಿದೆ. ಇದು ನಮ್ಮ ಡಯಟ್ಟಿನ ಅತ್ಯಂತ ಆಕರ್ಶಕ ಕೊಠಡಿಯಾಗಿದೆ.

       ಮೂರನೇ ಕಟ್ಟಡದಲ್ಲಿ ಅತ್ಯುತ್ತಮವಾದ ಗ್ರಂಥಾಲಯವಿದೆ. ಗ್ರಂಥಾಲಯದಲ್ಲಿ ಕಂಪ್ಯೂಟರ್ ಮತ್ತು ಪ್ರಿಂಟರ್ ಅಳವಡಿಸಲಾಗಿದೆ. ಮಕ್ಕಳು ಮತ್ತು ಶಿಕ್ಷಕರು ಅಭ್ಯಾಸ ನಡೆಸಲು ಸುಸಜ್ಜಿತ ಆಸನ ವ್ಯವಸ್ಥೆಯಿದೆ. ಇದೇ ಕೊಠಡಿಯಲ್ಲಿ ಗಣಿತದ ಲ್ಯಾಬ್ ಕೂಡ ಇದೆ. ಇದರಲ್ಲಿ ಶಿಕ್ಷಕರೇ ತಯಾರಿಸಿದ ಕಲಿಕೋಪಕರಣಗಳಿವೆ. ಈ ಕೊಠಡಿಯ ಅತ್ಯಂತ ಆಕರ್ಷಣೀಯ ವಸ್ತುವೆಂದರೆ ಗಡಿಯಾರ. ಇದರಲ್ಲಿ ಗಣಿತದ ಸಮಸ್ಯೆಗಳನ್ನು ನೀಡಿ ಅದರ ಉತ್ತರಗಳೇ ಸಮಯವಾಗಿರುತ್ತದೆ. ಪ್ರಾಥಮಿಕ ಮತ್ತು ಪ್ರೌಢ ಹಂತದ ಗಣಿತದ ಎಲ್ಲಾ ಪಠ್ಯಾಂಶಗಳ ಕಲಿಕೋಪಕರಣಗಳನ್ನು ಇಲ್ಲಿ ಇರಿಸಲಾಗಿದೆ. ಈ ಕಟ್ಟಡದ ಮೊದಲನೇ ಮಹಡಿಯಲ್ಲಿ ಜಿಲ್ಲಾ ಸಂಪನ್ಮೂಲ ಘಟಕ ಮತ್ತು ವಿಜ್ಞಾನ ಲ್ಯಾಬ್ ಗಳಿವೆ. ಇಲ್ಲಿ ಎರಡು ಕಂಪ್ಯೂಟರ್, ಪ್ರಿಂಟರ್, ಪ್ರೊಜೆಕ್ಟರ್, ಸ್ಮಾರ್ಟ್ ಕ್ಲಾಸ್ ಮತ್ತು ಫ್ಲಾಷ್ ಲೈಟುಗಳು, ಮೈಕ್ ವ್ಯವಸ್ಥೆ ಹಾಗೂ ಗ್ರೀನ್ ಮತ್ತು ವೈಟ್ ಬೋರ್ಡ್ ಕೂಡ ಲಭ್ಯವಿದೆ. ಕಿಟಕಿಗಳಿಗೆ ವಿಂಡೋ ಕರ್ಟನ್ನುಗಳನ್ನು ಅಳವಡಿಸಲಾಗಿದೆ. ಇದು ತರಬೇತಿ ನೀಡಲು ಮತ್ತು ಸಭೆ ನಡೆಸಲು ಅತ್ಯಂತ ಸುಸಜ್ಜಿತ ಕೊಠಡಿಯಾಗಿದೆ. ಇದಕ್ಕೆ ಹೊಂದಿಕೊಂಡಂತೆ ಗೆಸ್ಟ್ ಹೌಸ್ ಕೂಡ ಇದೆ. ಇಲ್ಲಿಯೂ ಎರಡು ಕೊಠಡಿಗಳಿವೆ. ಇದರಲ್ಲಿ ಹಾಸಿಗೆ, ಸ್ನಾನ ಗೃಹ, ಶೌಚಾಲಯ ವ್ಯವಸ್ಥೆಯಿದೆ. ಸ್ನಾನಕ್ಕೆ ಬಿಸಿ ನೀರಿಗಾಗಿ ಸೋಲಾರ್ ವಾಟರ್ ಹೀಟರ್ ಅಳವಡಿಸಲಾಗಿದೆ.

       ಈ ಡಯಟ್ಟಿನಲ್ಲಿ ಸುಂದರ ವಿಶಾಲವಾದ ಆವರಣವಿದ್ದು ಎಲ್ಲಾ ಕಡೆಗೆ ಸಿಮೆಂಟ್ ಬ್ರಿಕ್ಸ್ ಅಳವಡಿಸಲಾಗಿದೆ. ಆವರಣದಲ್ಲಿ ತೆಂಗಿನಮರ, ಅಡಿಕೆ ಮರ, ಅಶೋಕ ವೃಕ್ಷ ಮತ್ತು ಇತರೆ ಹೂವಿನ ಗಿಡಗಳಿವೆ. ಕಛೇರಿಗೆ ಝೆರಾಕ್ಸ ಯಂತ್ರ, ದೂರವಾಣಿ ಮತ್ತು ಇಂಟರ್ ನೆಟ್ ಸೌಲಭ್ಯವಿದೆ. ಎಲ್ಲಾ ನೌಕರರಿಗೂ ಕಂಪ್ಯೂಟರ್ ನೀಡಲಾಗಿದೆ. ರೆಕಾರ್ಡ್ ರೂಂ ಪ್ರತ್ಯೇಕವಾಗಿದೆ. ನಗರ ಸಭೆಯ ನೀರು ಜೊತೆಗೆ ಡಯಟ್ಟಿನದೇ ಬೋರ್ ವೆಲ್ ಕೂಡ ಇದೆ. ಒಟ್ಟಿನಲ್ಲಿ 24 ಗಂಟೆಯೂ ನೀರಿನ ಸೌಲಭ್ಯವಿದೆ.

       ಪ್ರಾಂಶುಪಾಲರ ಕೊಠಡಿ, ವಿಡಿಯೋ ಕಾನ್ಫರೆನ್ಸ್ ಹಾಲ್ ಮತ್ತು ಟೆಲಿ ಕಾನ್ಫರೆನ್ಸ್ ಹಾಲುಗಳಲ್ಲಿ ಎಸಿ ಅಳವಡಿಸಲಾಗಿದೆ. ಯುಪಿಎಸ್ ವ್ಯವಸ್ಥೆಯೂ ಇದೆ. ಡಯಟ್ಟಿನಲ್ಲಿ ಸುಮಾರು 20 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪ್ರತಿ ವರ್ಷ ಶಾಲೆಗಳ ಯಶೋಗಾಥೆಗಳನ್ನು ಬಿಂಬಿಸುವ ಶಿಖರದ ಮೆಟ್ಟಿಲು ಎನ್ನು ಪುಸ್ತಕವನ್ನು ಹೊರತರಲಾಗುತ್ತಿದೆ. ಹಾಗೂ ನಾವೀನ್ಯಯುತ ಚಟುವಟಿಕೆಗಳನ್ನು ಪ್ರೇರೇಪಿಸಲು ಪ್ರತಿ ಮಾಹೆಯೂ ಸಾಧ್ಯವೆಂದರೆ ಸಾಧ್ಯ ಎನ್ನುವ ಫ್ಲೆಕ್ಸನ್ನು ಅಳವಡಿಸಲಾಗುತ್ತಿದೆ. ಇದರಲ್ಲಿ ಆ ಮಾಹೆಯಲ್ಲಿ ಜರುಗಿಸಿದ ಉತ್ತಮ ಕಲಿಕಾ ಚಟುವಟಿಕೆಗಳು, ಭೌತಿಕ ಸೌಲಭ್ಯಗಳ ಸುಧಾರಣೆ, ದಾನವಾಗಿ ಪಡೆದ ಸೌಲಭ್ಯಗಳನ್ನು ಪ್ರದರ್ಶಿಸಲಾಗುತ್ತಿದೆ. ಒಟ್ಟಿನಲ್ಲಿ ಇದೊಂದು ಮಾದರಿ ಡಯಟ್ಟಾಗಿದೆ.

 

ಇತ್ತೀಚಿನ ನವೀಕರಣ​ : 17-04-2021 02:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಶಿವಮೊಗ್ಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080