ಅಭಿಪ್ರಾಯ / ಸಲಹೆಗಳು

ಪಕ್ಷಿನೋಟ

 

ಶಿವಮೊಗ್ಗ ಡಯಟ್ ಒಂದು ಪರಿಚಯ

       1992 ರಲ್ಲಿ ಉನ್ನತೀಕರಣಗೊಂಡು 18-01-1993 ರಿಂದ ಕಾರ್ಯಾರಂಭವಾದ ಶಿವಮೊಗ್ಗದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಇಂದು ಕರ್ನಾಟಕದಲ್ಲೇ ಒಂದು ಹೆಸರು ಪಡೆದ ಸಂಸ್ಥೆಯಾಗಿದೆ. ಈ ಡಯಟ್ಟಿನಲ್ಲಿ ಈ ವರೆಗೆ 30 ಪ್ರಾಂಶುಪಾಲರು ಕಾರ್ಯ ನಿರ್ವಹಿಸಿದ್ದಾರೆ. ಪ್ರತಿಯೊಬ್ಬರ  ಅವಧಿಯಲ್ಲೂಪ್ರಗತಿ ಸಾಧಿಸುತ್ತಾ ಇಂದು ಅತ್ಯುನ್ನತ ಮಟ್ಟಕ್ಕೆ ತಲುಪಿದೆ. ಈ ಡಯಟ್ಟಿನಲ್ಲಿ ಎಲ್ಲಾ ಮೂಲ ಸೌಲಭ್ಯಗಳಿದ್ದು, ಇರುವ ಎಲ್ಲಾ ಹಿರಿಯ ಉಪನ್ಯಾಸಕರು, ಉಪನ್ಯಾಸಕರು ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ಲಿಪಿಕ ನೌಕರರೂ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

       ಸದರಿ ಡಯಟ್ಟಿನಲ್ಲಿ ಒಟ್ಟು 50 ಹುದ್ದೆಗಳು ಮಂಜೂರಾಗಿದ್ದು, ಇದರಲ್ಲಿ 27 ಪುರುಷರೂ ಮತ್ತು 17 ಮಹಿಳೆಯರೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1 ಉಪನ್ಯಾಸಕರ ಹುದ್ದೆ, 1 ವೃತ್ತಿ ಶಿಕ್ಷಕರ ಹುದ್ದೆ, 1 ಸ್ಟೆನೊ ಮತ್ತು 3 ಗ್ರೂಪ್ ಡಿ ಹುದ್ದೆಗಳು ಖಾಲಿ ಇವೆ. ಕೆಲಸ ನಿರ್ವಹಿಸುತ್ತಿರುವ 44 ಅಧಿಕಾರಿ ಮತ್ತು ಸಿಬ್ಬಂದಿಯವರಲ್ಲಿ ಒಬ್ಬರು ಪ್ರಾಂಶುಪಾಲರು, 7 ಜನ ಹಿರಿಯ ಉಪನ್ಯಾಸಕರು, 16 ಜನ ಉಪನ್ಯಾಸಕರು, 17 ಜನ ಲಿಪಿಕ ನೌಕರರು, ಒಬ್ಬರು ಡ್ರೈವರ್, 3 ಜನ ‘ಡಿ’ ದರ್ಜೆ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

       ಡಯಟ್ಟಿನಲ್ಲಿ ಮೂರು ಕಟ್ಟಡಗಳಿದ್ದು, ಎಲ್ಲಾ ಸುವ್ಯವಸ್ಥೆಯನ್ನು ಹೊಂದಿದೆ. ಪ್ರಧಾನ ಕಟ್ಟಡದಲ್ಲಿ ಪ್ರತ್ಯೇಕವಾಗಿ ಪ್ರಾಂಶುಪಾಲರ, ಉಪ ಪ್ರಾಂಶುಪಾಲರ, ಹಿರಿಯ ಉಪನ್ಯಾಸಕರು ಮತ್ತು ಉಪನ್ಯಾಸಕರ ಹಾಗೂ ಲಿಪಿಕ ನೌಕರರ ಕೊಠಡಿಗಳಿವೆ. ಇದಲ್ಲದೆ ಎರಡು ಕಂಪ್ಯೂಟರ್ ಕೊಠಡಿ, ಭಾಷಾ ಲ್ಯಾಬ್, ಇಂಗ್ಲೀಷ್ ಕಾರ್ನರ್, ನಲಿ ಕಲಿ ಕೊಠಡಿ, ಟೆಲಿ ಕಾನ್ಫರೆನ್ಸ್ ಹಾಲ್  ಮತ್ತು ವಿಡಿಯೋ ಕಾನ್ಫರೆನ್ಸ್ ಹಾಲ್ ಇದೆ. ತರಬೇತಿ ನೀಡಲು ಅನುಕೂಲವಾಗುವಂತೆ ಎರಡು ಕೊಠಡಿಗಳಿಗೆ ಪ್ರೊಜೆಕ್ಟರ್ ಅಳವಡಿಸಿದೆ ಹಾಗೂ ಟೆಲಿ ಕಾನ್ಫರೆನ್ಸ್ ಹಾಲಿನಲ್ಲಿ ಸ್ಮಾರ್ಟ್ ಬೊರ್ಡ್ ನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಳವಡಿಸಲಾಗಿದೆ. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳಿವೆ. ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಫಿಲ್ಟರ್ ಅಳವಡಿಸಲಾಗಿದೆ. ಹಾಗೂ ಬೆಂಕಿ ನಂದಕಗಳನ್ನು (Fire Extinguisher) ಅಲ್ಲಲ್ಲಿ ಅಳವಡಿಸಲಾಗಿದೆ ಒಟ್ಟಿನಲ್ಲಿ ಎಲ್ಲಾ ಮೂಲ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ ಕಟ್ಟಡವಾಗಿದೆ.

       ಪಕ್ಕದಲ್ಲೇ ಇರುವ ಮತ್ತೊಂದು ಕಟ್ಟಡದಲ್ಲಿ ವಿಶಾಲವಾದ ಸಭಾಂಗಣವಿದೆ. ಇದರಲ್ಲಿ ಸುಮಾರು 150 ಜನರು ಕೂರಲು ಅವಕಾಶವಿದ್ದು ಪೀಠೋಪಕರಣಗಳನ್ನು ಅಳವಡಿಸಲಾಗಿದೆ. ಸಭಾಂಗಣಕ್ಕೆ ಹೊಂದಿಕೊಂಡಂತೆ ಪುರುಷ ಮತ್ತು ಮಹಿಳಾ ಶೌಚಾಲಯಗಳಿವೆ. ಪಕ್ಕದಲ್ಲೇ ಪಿ ಎಸ್ ಡಿ ಇ ವಿಭಾಗವಿದೆ. ಈ ವಿಭಾಗದ ಮುಖ್ಯಸ್ಥರು ಮತ್ತು ಉಪನ್ಯಾಸಕರಿಗೆ ಪ್ರತ್ಯೇಕ ಕೊಠಡಿ ಸೌಲಭ್ಯವಿದೆ. ತರಗತಿ ನಡೆಸಲು ಎರಡು ಕೊಠಡಿಗಳಿವೆ. ಇದರಲ್ಲೂ ತರಬೇತಿ ಮತ್ತು ತರಗತಿ ನಿರ್ವಹಣೆಗಾಗಿ ಪ್ರೊಜೆಕ್ಟರ್ ಅಳವಡಿಸಲಾಗಿದೆ. ಇದರ ಜೊತೆಗೆ 4 ವಿಶಾಲವಾದ ನಾಲ್ಕು ಕೊಠಡಿಗಳಿವೆ. ಈ ಕೊಠಡಿಗಳನ್ನು ತರಬೇತಿ ನೀಡಲು ಮತ್ತು ಪರೀಕ್ಷಾ ಕಾರ್ಯಕ್ಕಾಗಿ ಬಳಸಲಾಗುತ್ತಿದೆ. ಇದಕ್ಕೂ ಪ್ರತ್ಯೇಕವಾಗಿ ಶೌಚಾಲಯಗಳಿವೆ. ಇದಲ್ಲದೆ ಇದೇ ಕಟ್ಟಡದಲ್ಲಿ ಜಿಯೋ ಲ್ಯಾಬ್ ಕೂಡ ಇದೆ. ಇದು ಒಂದು ರೀತಿಯಲ್ಲಿ ಆಧುನಿಕ ವಸ್ತು ಸಂಗ್ರಹಾಲಯದಂತಿದೆ. ಇದರಲ್ಲಿ ಫ್ಲಾಷ್ ಲೈಟ್ ಮತ್ತು ಸೌಂಡ್ ಸಿಸ್ಟಂ ಅಳವಡಿಸಲಾಗಿದೆ. ಇದು ನಮ್ಮ ಡಯಟ್ಟಿನ ಅತ್ಯಂತ ಆಕರ್ಶಕ ಕೊಠಡಿಯಾಗಿದೆ.

       ಮೂರನೇ ಕಟ್ಟಡದಲ್ಲಿ ಅತ್ಯುತ್ತಮವಾದ ಗ್ರಂಥಾಲಯವಿದೆ. ಗ್ರಂಥಾಲಯದಲ್ಲಿ ಕಂಪ್ಯೂಟರ್ ಮತ್ತು ಪ್ರಿಂಟರ್ ಅಳವಡಿಸಲಾಗಿದೆ. ಮಕ್ಕಳು ಮತ್ತು ಶಿಕ್ಷಕರು ಅಭ್ಯಾಸ ನಡೆಸಲು ಸುಸಜ್ಜಿತ ಆಸನ ವ್ಯವಸ್ಥೆಯಿದೆ. ಇದೇ ಕೊಠಡಿಯಲ್ಲಿ ಗಣಿತದ ಲ್ಯಾಬ್ ಕೂಡ ಇದೆ. ಇದರಲ್ಲಿ ಶಿಕ್ಷಕರೇ ತಯಾರಿಸಿದ ಕಲಿಕೋಪಕರಣಗಳಿವೆ. ಈ ಕೊಠಡಿಯ ಅತ್ಯಂತ ಆಕರ್ಷಣೀಯ ವಸ್ತುವೆಂದರೆ ಗಡಿಯಾರ. ಇದರಲ್ಲಿ ಗಣಿತದ ಸಮಸ್ಯೆಗಳನ್ನು ನೀಡಿ ಅದರ ಉತ್ತರಗಳೇ ಸಮಯವಾಗಿರುತ್ತದೆ. ಪ್ರಾಥಮಿಕ ಮತ್ತು ಪ್ರೌಢ ಹಂತದ ಗಣಿತದ ಎಲ್ಲಾ ಪಠ್ಯಾಂಶಗಳ ಕಲಿಕೋಪಕರಣಗಳನ್ನು ಇಲ್ಲಿ ಇರಿಸಲಾಗಿದೆ. ಈ ಕಟ್ಟಡದ ಮೊದಲನೇ ಮಹಡಿಯಲ್ಲಿ ಜಿಲ್ಲಾ ಸಂಪನ್ಮೂಲ ಘಟಕ ಮತ್ತು ವಿಜ್ಞಾನ ಲ್ಯಾಬ್ ಗಳಿವೆ. ಇಲ್ಲಿ ಎರಡು ಕಂಪ್ಯೂಟರ್, ಪ್ರಿಂಟರ್, ಪ್ರೊಜೆಕ್ಟರ್, ಸ್ಮಾರ್ಟ್ ಕ್ಲಾಸ್ ಮತ್ತು ಫ್ಲಾಷ್ ಲೈಟುಗಳು, ಮೈಕ್ ವ್ಯವಸ್ಥೆ ಹಾಗೂ ಗ್ರೀನ್ ಮತ್ತು ವೈಟ್ ಬೋರ್ಡ್ ಕೂಡ ಲಭ್ಯವಿದೆ. ಕಿಟಕಿಗಳಿಗೆ ವಿಂಡೋ ಕರ್ಟನ್ನುಗಳನ್ನು ಅಳವಡಿಸಲಾಗಿದೆ. ಇದು ತರಬೇತಿ ನೀಡಲು ಮತ್ತು ಸಭೆ ನಡೆಸಲು ಅತ್ಯಂತ ಸುಸಜ್ಜಿತ ಕೊಠಡಿಯಾಗಿದೆ. ಇದಕ್ಕೆ ಹೊಂದಿಕೊಂಡಂತೆ ಗೆಸ್ಟ್ ಹೌಸ್ ಕೂಡ ಇದೆ. ಇಲ್ಲಿಯೂ ಎರಡು ಕೊಠಡಿಗಳಿವೆ. ಇದರಲ್ಲಿ ಹಾಸಿಗೆ, ಸ್ನಾನ ಗೃಹ, ಶೌಚಾಲಯ ವ್ಯವಸ್ಥೆಯಿದೆ. ಸ್ನಾನಕ್ಕೆ ಬಿಸಿ ನೀರಿಗಾಗಿ ಸೋಲಾರ್ ವಾಟರ್ ಹೀಟರ್ ಅಳವಡಿಸಲಾಗಿದೆ.

       ಈ ಡಯಟ್ಟಿನಲ್ಲಿ ಸುಂದರ ವಿಶಾಲವಾದ ಆವರಣವಿದ್ದು ಎಲ್ಲಾ ಕಡೆಗೆ ಸಿಮೆಂಟ್ ಬ್ರಿಕ್ಸ್ ಅಳವಡಿಸಲಾಗಿದೆ. ಆವರಣದಲ್ಲಿ ತೆಂಗಿನಮರ, ಅಡಿಕೆ ಮರ, ಅಶೋಕ ವೃಕ್ಷ ಮತ್ತು ಇತರೆ ಹೂವಿನ ಗಿಡಗಳಿವೆ. ಕಛೇರಿಗೆ ಝೆರಾಕ್ಸ ಯಂತ್ರ, ದೂರವಾಣಿ ಮತ್ತು ಇಂಟರ್ ನೆಟ್ ಸೌಲಭ್ಯವಿದೆ. ಎಲ್ಲಾ ನೌಕರರಿಗೂ ಕಂಪ್ಯೂಟರ್ ನೀಡಲಾಗಿದೆ. ರೆಕಾರ್ಡ್ ರೂಂ ಪ್ರತ್ಯೇಕವಾಗಿದೆ. ನಗರ ಸಭೆಯ ನೀರು ಜೊತೆಗೆ ಡಯಟ್ಟಿನದೇ ಬೋರ್ ವೆಲ್ ಕೂಡ ಇದೆ. ಒಟ್ಟಿನಲ್ಲಿ 24 ಗಂಟೆಯೂ ನೀರಿನ ಸೌಲಭ್ಯವಿದೆ.

       ಪ್ರಾಂಶುಪಾಲರ ಕೊಠಡಿ, ವಿಡಿಯೋ ಕಾನ್ಫರೆನ್ಸ್ ಹಾಲ್ ಮತ್ತು ಟೆಲಿ ಕಾನ್ಫರೆನ್ಸ್ ಹಾಲುಗಳಲ್ಲಿ ಎಸಿ ಅಳವಡಿಸಲಾಗಿದೆ. ಯುಪಿಎಸ್ ವ್ಯವಸ್ಥೆಯೂ ಇದೆ. ಡಯಟ್ಟಿನಲ್ಲಿ ಸುಮಾರು 20 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪ್ರತಿ ವರ್ಷ ಶಾಲೆಗಳ ಯಶೋಗಾಥೆಗಳನ್ನು ಬಿಂಬಿಸುವ ಶಿಖರದ ಮೆಟ್ಟಿಲು ಎನ್ನು ಪುಸ್ತಕವನ್ನು ಹೊರತರಲಾಗುತ್ತಿದೆ. ಹಾಗೂ ನಾವೀನ್ಯಯುತ ಚಟುವಟಿಕೆಗಳನ್ನು ಪ್ರೇರೇಪಿಸಲು ಪ್ರತಿ ಮಾಹೆಯೂ ಸಾಧ್ಯವೆಂದರೆ ಸಾಧ್ಯ ಎನ್ನುವ ಫ್ಲೆಕ್ಸನ್ನು ಅಳವಡಿಸಲಾಗುತ್ತಿದೆ. ಇದರಲ್ಲಿ ಆ ಮಾಹೆಯಲ್ಲಿ ಜರುಗಿಸಿದ ಉತ್ತಮ ಕಲಿಕಾ ಚಟುವಟಿಕೆಗಳು, ಭೌತಿಕ ಸೌಲಭ್ಯಗಳ ಸುಧಾರಣೆ, ದಾನವಾಗಿ ಪಡೆದ ಸೌಲಭ್ಯಗಳನ್ನು ಪ್ರದರ್ಶಿಸಲಾಗುತ್ತಿದೆ. ಒಟ್ಟಿನಲ್ಲಿ ಇದೊಂದು ಮಾದರಿ ಡಯಟ್ಟಾಗಿದೆ.

ವಿಭಾಗ ಮತ್ತು ಸಿಬ್ಬಂದಿ ಮಾಹಿತಿ

ಕ್ರ.ಸಂ ವಿಭಾಗದ ಹೆಸರು ವಿಭಾಗದ ಮುಖ್ಯಸ್ಥರು ವಿಭಾಗದ ಉಪನ್ಯಾಸಕರು ವಿಭಾಗದ ಕಾರ್ಯಗಳು
1 ಸೇವಾಪೂರ್ವ ಶಿಕ್ಷಕರ ಶಿಕ್ಷಣ ವಿಭಾಗ(PSTE)          ವೀರಭದ್ರಪ್ಪ       ಹಿರಿಯ ಉಪನ್ಯಾಸಕರು ಶಶಿಕಲಾ ಬಿ ಹೆಚ್ ಉಪನ್ಯಾಸಕರು ಡಿ.ಇಎಲ್‌,ಇಡಿ (ಪ್ರಾಥಮಿಕ ಶಾಲಾ ಶಿಕ್ಷಕರ) ಕೋರ್ಸ್‌ ನಿರ್ವಹಣೆ - ತರಬೇತಿ ಮತ್ತು ಭೋಧನ ಶಾಸ್ತ್ರ ವಿಧಾನಗಳು -ಶಾಲೆಗಳಿಗೆ ಆಪ್ತಸಮಾಲೋಚನೆ ಮತ್ತು ಮಾರ್ಗದರ್ಶನ
ಜಯಮ್ಮ ಎಲ್  ಉಪನ್ಯಾಸಕರು
ಶಕುಂತಳ ಎನ್ ಕೆ ಉಪನ್ಯಾಸಕರು
ದೈ ಶಿ ಉಪನ್ಯಾಸಕರು
2 ಜಿಲ್ಲಾ ಸಂಪನ್ಮೂಲ ಘಟಕ
(DRU)
ಫಣೀಶ ಎಂ ಎಸ್   ಹಿರಿಯ ಉಪನ್ಯಾಸಕರು ಲೀಲಾವತಿ ಉಪನ್ಯಾಸಕರು ಯೋಜನೆ, ಅನುಷ್ಠಾನ, ಮತ್ತು ತರಬೇತಿಗಳ ಸಮನ್ವಯ -ಸಂಪನ್ಮೂಲ ವ್ಯಕ್ತಿಗಳ ಪುನಶ್ಚೇತನ
-ಎಲ್ಲಾ ರೀತಿಯ ಸಂಪನ್ಮೂಲಗಳ ದತ್ತಾಂಶ ನಿರ್ವಹಣೆ ಹಾಗೂ ನಲಿ ಕಲಿ ಕೊಠಡಿ, ಇಂಗ್ಲೀಷ್ ಕಾರ್ನರ್ ಮತ್ತು ವಿಜ್ಞಾನ ಲ್ಯಾಬ್ ಗಳ ನಿರ್ವಹಣೆ
ಈಶ್ವರಪ್ಪ ಹೆಚ್ ಎಂ ಉಪನ್ಯಾಸಕರು
3 ಪಠ್ಯವಸ್ತು ಅಭಿವೃದ್ಧಿ ಮತ್ತು ಮೌಲ್ಯಮಾಪನ ವಿಭಾಗ
(CMDE)
     ನಾಗರಾಜ ಎಂ      ಹಿರಿಯ ಉಪನ್ಯಾಸಕರು

ನವೀದಾ ಖಾನಂ

ಉಪನ್ಯಾಸಕರು

ಸ್ಥಳೀಯ ವಿಷಯಗಳಿಗೆ ನಿರ್ದಿಷ್ಟ ಪಠ್ಯವಸ್ತು ನಿರ್ವಹಣೆ. -ಪ್ರಶ್ನೆಕೋಠಿ, ವಿಕ್ಷಣಾ ನಮೂನೆ ಮುಂತಾದ ಮೌಲ್ಯಮಾಪನ ಸಾಧನ ಮತ್ತು ತಂತ್ರಗಳ ಅಭಿವೃದ್ಧಿ -ಕಲಿಕಾರ್ಥಿಗಳ ಸಾಧನಾ ಮಟ್ಟ ಪರೀಕ್ಷೆ ಮತ್ತು ಭಾಷಾ ಲ್ಯಾಬ್ ನಿರ್ವಹಣೆ

ಗೋಪ ಎಂ

ಉಪನ್ಯಾಸಕರು

4 ಯೋಜನೆ ಮತ್ತು ನಿರ್ವಹಣೆ
(P & M)
    ಹರಿಪ್ರಸಾದ ಜಿ ವಿ     ಹಿರಿಯ ಉಪನ್ಯಾಸಕರು

ವಿನೋದ ಕುಮಾರಿ ಹೆಚ್ ವಿ

ಉಪನ್ಯಾಸಕರು

ಜಿಲ್ಲಾ ಅಂಕಿಅಂಶಗಳ ನಿರ್ವಹಣೆ. - ದಾಖಲಾತಿ, ಹಾಜರಾತಿ, ಉಚಿತ ಸರ್ಕಾರಿ ಸೌಲಭ್ಯಗಳು ಮುಂತಾದವುಗಳ ಬಗ್ಗೆ ಅಧ್ಯಯನ. -ಸೂಕ್ಷ್ಮಯೋಜನೆ ತಯಾರಿಕೆಗೆ ತಂತ್ರಿಕ ಸಹಕಾರ. - ಶಾಲಾ ಮುಖ್ಯಸ್ಥರುಗಳಿಗೆ ಯೋಜನೆ ಮತ್ತು ನಿರ್ವಹಣೆಯ ತರಬೇತಿ.

ಜ್ಯೋತಿ ಕುಮಾರಿ ಕೆ ವಿ

ಉಪನ್ಯಾಸಕರು

5 ಶೈಕ್ಷಣಿಕ ತಂತ್ರಜ್ಞಾನ
(ET)
 ಸತ್ಯನಾರಾಯಣ ಟಿ ಎಂ ಹಿರಿಯ ಉಪನ್ಯಾಸಕರು

ಅಸುಂತ ಸಿಕ್ವೇರ

ಉಪನ್ಯಾಸಕರು

ಶೈಕ್ಷಣಿಕ ತಂತ್ರಜ್ಷಾನಕ್ಕೆ ಸಂಬಂಧಿಸಿದಂತೆ ಸಂಪನ್ಮೂಲಗಳ ಅಭಿವೃದ್ಧಿ. -ಕಂಪ್ಯೂಟರ್‌ ಪ್ರಯೋಗಾಲಯ, ವಿಡಿಯೋಕಾನ್ಫರೆನ್ಸ್ ಹಾಲ್ ನಿರ್ವಹಣೆ. -ಶಾಲಾ ಮಕ್ಕಳ ಕಲಿಕೆಗೆ ಪೂರಕವಾದ ರೇಡಿಯೋ- ದೂರದರ್ಶನ ಕಾರ್ಯಕ್ರಮ ಆಯೋಜನೆ. - ಶೈಕ್ಷಣಿಕ ತಂತ್ರಜ್ಞಾನದ ಬಗ್ಗೆ ತರಬೇತಿಗಳ ಆಯೋಜನೆ.

ಅಶ್ವಿನ್ ಸಿ ಆರ್

ಉಪನ್ಯಾಸಕರು

6 ಸೇವಾನಿರತ ತರಬೇತಿ, ಕ್ಷೇತ್ರ ಪ್ರಕ್ರಿಯೆ, ನಾವಿನ್ಯತೆ, ಮತ್ತು ಸಮನ್ವಯತೆ. (IFIC)   ಶೇರ್ ಅಲಿ ಹೆಚ್ ಆರ್  ಹಿರಿಯ ಉಪನ್ಯಾಸಕರು

ವೀಣಾ ಕೆ

ಉಪನ್ಯಾಸಕರು

ಎಲ್ಲಾ ಸೇವಾನಿರತ ಶೈಕ್ಷಣಿಕ ಕಾರ್ಯಕ್ರಮಗಳ ಯೋಜನೆ, ಅನುಷ್ಠಾನ, ಮತ್ತು ಸಮನ್ವಯ
-ಸೇವಾ ನಿರತ ಶಿಕ್ಷಕರ ಹಾಗು ತರಬೇತಿಗಳ ದತ್ತಾಂಶ ನಿರ್ವಹಣೆ ಹಾಗೂ ಜಿಯೋ ಲ್ಯಾಬ್ ನಿರ್ವಹಣೆ

ಮಂಜುನಾಥ ಎನ್

ಉಪನ್ಯಾಸಕರು

7 ಕಾರ್ಯಾನುಭವ (WE) ಫಾತಿಮಾಬೀ ಟಿ ಐ  ಹಿರಿಯ ಉಪನ್ಯಾಸಕರು

ಗೀತಾ ಆರ್

ಉಪನ್ಯಾಸಕರು

ಕಡಿಮೆ ವೆಚ್ಚದ ಬೋಧನಾ- ಕಲಿಕೋಪಕರಣಗಳ ಅಭಿವೃದ್ಧಿ - ಕಾರ್ಯನುಭವ ಚಟುವಟಿಕೆಗಳಿಗಾಗಿ ತೋಟ-ಕೈತೋಟಗಳ ಅಭಿವೃದ್ಧಿ ಮತ್ತು ನಿರ್ವಹಣೆ ಹಾಗೂ ಗಣಿತ ಲ್ಯಾಬ್ ನಿರ್ವಹಣೆ

ಮಂಜಪ್ಪ ಆರ್

ಉಪನ್ಯಾಸಕರು

 

ಸ್ಥಾಪನೆ: 18-01-1993
ಪ್ರಾಂಶುಪಾಲರುಗಳ ಸೇವಾ ವಿವರ
ಕ್ರ.ಸಂ ಹೆಸರು ಸೇವಾ ವಿವರ
1 ಶ್ರೀ ಟಿ ಎಂ ಕುಮಾರ್ 18-01-1993 26-06-1993
2 ಶ್ರೀ ಫೈಜ್ ಅಹಮದ್ 28-06-1993 03-11-1993
3 ಶ್ರೀ ಎಂ ಚಂದ್ರಶೇಖರಯ್ಯ (ಪ್ರಭಾರಿ) 01-12-1993 03-03-1994
4 ಶ್ರೀ ಕೆ ಪ್ರಹ್ಲಾದಾಚಾರ್ 04-03-1994 06-06-1995
5 ಶ್ರೀ ಆರ್ ನರೇಂದ್ರ 07-06-1995 21-06-1998
6 ಶ್ರೀ ಜಿ ಸೋಮಶೇಖರಪ್ಪ 22-06-1998 08-12-1998
7 ಶ್ರೀ ಎನ್ ಎಸ್ ಕುಮಾರ್ (ಪ್ರಭಾರಿ) 09-12-1998 16-12-1998
8 ಶ್ರೀ ಎಂ ಚಂದ್ರಶೇಖರಯ್ಯ  17-12-1998 07-04-2001
9 ಶ್ರೀ ಬಿ ಎನ್ ರಾಮಚಂದ್ರ (ಪ್ರಭಾರಿ) 08-04-2001 01-07-2001
10 ಶ್ರೀ ಕೆ ಎಸ್ ಷಡಕ್ಷರಪ್ಪ 02-07-2001 31-05-2003
11 ಶ್ರೀ ಎಸ್ ಹನುಮಂತಪ್ಪ (ಪ್ರಭಾರಿ) 01-06-2003 08-06-2003
12 ಶ್ರೀ ಅಬ್ದುಲ್ ಅಲೀಂ 09-06-2003 23-09-2004
13 ಶ್ರೀಮತಿ ಜಿ ಪಿ ಚಂದ್ರಮ್ಮ (ಪ್ರಭಾರಿ) 24-09-2004 14-12-2004
14 ಶ್ರೀ ಬಿ ಎನ್ ರಾಮಚಂದ್ರ (ಪ್ರಭಾರಿ) 14-12-2004 05-03-2005
15 ಶ್ರೀ ಜಿ ಆರ್ ತಿಪ್ಪೇಸ್ವಾಮಿ 05-03-2005 05-06-2006
16 ಶ್ರೀಮತಿ ಜಿ ಪಿ ಚಂದ್ರಮ್ಮ (ಪ್ರಭಾರಿ) 06-06-2006 02-08-2006
17 ಶ್ರೀ ಎಲ್ ರಂಗಪ್ಪ 03-08-2006 24-08-2006
18 ಶ್ರೀ ಬಿ ಎ ರಾಜಶೇಖರ 24-08-2006 12-01-2007
19 ಶ್ರೀಮತಿ ಜಿ ಪಿ ಚಂದ್ರಮ್ಮ (ಪ್ರಭಾರಿ) 12-01-2007 26-01-2007
20 ಶ್ರೀ ಸಿ ನಾಗರಾಜನ್ 27-01-2007 05-07-2007
21 ಶ್ರೀ ಎನ್ ಎಸ್ ಕುಮಾರ್  06-07-2007 10-07-2007
22 ಶ್ರೀಮತಿ ಜಿ ಪಿ ಚಂದ್ರಮ್ಮ (ಪ್ರಭಾರಿ) 11-07-2007 16-07-2007
23 ಶ್ರೀ ಎ ದೇವಪ್ರಕಾಶ್ 16-07-2007 23-08-2007
24 ಶ್ರೀಮತಿ ಜಿ ಪಿ ಚಂದ್ರಮ್ಮ  23-08-2007 04-01-2014
25 ಶ್ರೀಮತಿ ಎಸ್ ಈ ಗಾಯಿತ್ರಿ (ಪ್ರಭಾರಿ) 04-01-2014 27-11-2014
26 ಶ್ರೀ ಜಿ ಎಸ್ ಪ್ರಭುಸ್ವಾಮಿ 27-11-2014 20-03-2018
27 ಶ್ರೀ ಸಿ ನಂಜಯ್ಯ 21-03-2018 06-03-2019
28 ಶ್ರೀ ವೀರಭದ್ರಪ್ಪ(ಪ್ರಭಾರಿ) 07-03-2019 02-04-2019
29 ಶ್ರೀ ಡಿ ಮಂಜುನಾಥಯ್ಯ 03-04-2019 31-05-2019
30 ಶ್ರೀ ವೀರಭದ್ರಪ್ಪ(ಪ್ರಭಾರಿ) 01-06-2019 17-09-2019
31 ಶ್ರೀಮತಿ ಸುಮಂಗಳಾ ಪಿ ಕುಚಿನಾಡ  17-09-2019 31-10-2020
32 ಶ್ರೀ ವೀರಭದ್ರಪ್ಪ(ಪ್ರಭಾರಿ) 01-11-2020 20-11-2020
33 ಶ್ರೀ ಬಿ ಆರ್ ಬಸವರಾಜಪ್ಪ 20-11-2020  
34      
35      
ದಿನಾಂಕ 01-04-2021 ರಲ್ಲಿದ್ದಂತೆ    

 

ಮಂಜೂರಾದ ಹುದ್ದೆ ಮತ್ತು ಖಾಲಿ ಹುದ್ದೆಗಳ ಮಾಹಿತಿ

ಕ್ರ.ಸಂ ಪದನಾಮ ವೇತನ ಶ್ರೇಣಿ ವೃಂದ (ಎ,ಬಿ,ಸಿ,ಡಿ) ಮಂಜೂರಾತಿ ಕರ್ತವ್ಯ ನಿರತ ಖಾಲಿಹುದ್ದೆ ಷರಾ
1 ಪ್ರಾಂಶುಪಾಲರು 67550-104600 1 1 0  
2 ಹಿರಿಯ ಉಪನ್ಯಾಸಕರು 52650-97100 7 7 0  
3 ಉಪನ್ಯಾಸಕರು 43100-83900 ಬಿ 17 16 1  
4 ವೃತ್ತಿ ಶಿಕ್ಷಕರು 23500-67650 ಸಿ 1 0 1 ವೃತ್ತಿ ಶಿಕ್ಷಕರ ಹುದ್ದೆ ಶ್ರೀ ರಾಮಪ್ಪಗೌಡ ಎಸ್ ಬಿ ಇವರ ಬಡ್ತಿಯಿಂದ ದಿ.11-08-2011 ರಿಂದ ಖಾಲಿಯಿದೆ
5 ರಾಜ್ಯ ಲೆಕ್ಕಾಧೀಕ್ಷಕರು (ನಿಯೋಜನೆ) 40900-78200 ಸಿ 1 1 0  
6 ಅಧೀಕ್ಷಕರು 37900-70850 ಸಿ 2 2 0  
7 ಗ್ರಂಥಪಾಲಕರು 37900-70850 ಸಿ 1 1 0  
8 ಪ್ರಥಮ ದರ್ಜೆ ಸಹಾಯಕರು 27650-52650 ಸಿ 5 5 0  
9 ತಾಂತ್ರಿಕ ಸಹಾಯಕರು 27650-52650 ಸಿ 1 1 0  
10 ಅಂಕಿ ಅಂಶ ಸಹಾಯಕರು 27650-52650 ಸಿ 1 1 0  
11 ಶೀಘ್ರ ಲಿಪಿಗಾರರು 27650-52650 ಸಿ 1 0 1  
12 ದ್ವಿತೀಯ ದರ್ಜೆ ಸಹಾಯಕರು 21400-42000 ಸಿ 4 4 0  
13 ವಾಹನ ಚಾಲಕರು 21400-42000 ಸಿ 1 1 0  
14 ಪ್ರಯೋಗ ಶಾಲಾ ಸಹಾಯಕರು 19950-37900 ಡಿ 1 1 0  
15 ಗ್ರೂಪ್ 'ಡಿ' 17000-28950 ಡಿ 6 3 3  
ಒಟ್ಟು 50 44 6  

 

ಅಧಿಕಾರಿ ಮತ್ತು ಸಿಬ್ಬಂದಿ ಮಾಹಿತಿ
ಕ್ರ.ಸಂ ಅಧಿಕಾರಿ /ಸಿಬ್ಬಂದಿಯ ಹೆಸರು ಪದನಾಮ ವೃಂದ (ಎ,ಬಿ,ಸಿ,ಡಿ) ವಿದ್ಯಾರ್ಹತೆ ಪ್ರಸ್ತುತ ಕಚೇರಿಯಲ್ಲಿ ಯಾವ ದಿನಾಂಕದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಮೊಬೈಲ್ ಸಂಖ್ಯೆ
1 ಬಸವರಾಜಪ್ಪ ಬಿ ಆರ್ ಪ್ರಾಂಶುಪಾಲರು ಎಂ ಎ ಎಂ ಎಡ್ 20-11-2020 9480695172
2 ವೀರಭದ್ರಪ್ಪ ಹಿರಿಯ ಉಪನ್ಯಾಸಕರು ಎಂ ಎ ಬಿಎಡ್ 31-07-2017 9591345336
3 ಫಣೀಶ ಎಂ ಎಸ್ ಹಿರಿಯ ಉಪನ್ಯಾಸಕರು ಎಂ ಎ ಬಿಎಡ್ 29-07-2017 8277199398
4 ನಾಗರಾಜ ಎಂ ಹಿರಿಯ ಉಪನ್ಯಾಸಕರು ಎಂ ಎ ಎಂ ಎಡ್ 27-07-2017 9980453817
5 ಹರಿಪ್ರಸಾದ ಜಿ ವಿ ಹಿರಿಯ ಉಪನ್ಯಾಸಕರು ಎಂ ಎ ಎಂ ಎಡ್ 18-06-2017 9964314575
6 ಸತ್ಯನಾರಾಯಣ ಟಿ ಎಂ ಹಿರಿಯ ಉಪನ್ಯಾಸಕರು ಎಂ ಎ ಎಂ ಎಡ್ 22-11-2018 9482208514
7 ಶೇರ್ ಅಲಿ ಹೆಚ್ ಆರ್ ಹಿರಿಯ ಉಪನ್ಯಾಸಕರು ಎಂ ಎ ಎಂ ಎಡ್ 25-05-2019 9902202527
8 ಫಾತಿಮಾಬೀ ಟಿ ಐ ಹಿರಿಯ ಉಪನ್ಯಾಸಕರು ಎಂ ಎಸ್ಸಿ ಎಂ ಎಡ್ 09-12-2018 9845476842
9 ಈಶ್ವರಪ್ಪ ಹೆಚ್ ಎಂ ಉಪನ್ಯಾಸಕರು ಬಿ ಬಿಎಸ್ಸಿ ಬಿ ಎಡ್ 01-01-2021 9449954304
10 ಗೋಪ ಎಂ ಉಪನ್ಯಾಸಕರು ಬಿ ಎಂ ಎ ಬಿಎಡ್ 07-12-2020 9148723671
11 ಗೀತಾ ಆರ್ ಉಪನ್ಯಾಸಕರು ಬಿ ಎಂ ಎ ಬಿಎಡ್ 01-07-2011 9480277528
12 ವೀಣಾ ಕೆ ಉಪನ್ಯಾಸಕರು ಬಿ ಬಿಎಸ್ಸಿ ಎಂಎಡ್ 01-08-2018 9980517332
13 ಮಂಜುನಾಥ ಎನ್ ಉಪನ್ಯಾಸಕರು ಬಿ ಎಂ ಎ ಬಿಎಡ್ 17-07-2013 9886150442
14 ಅಸುಂತ ಸಿಕ್ವೇರ ಉಪನ್ಯಾಸಕರು ಬಿ ಎಂಎಸ್ಸಿ ಎಂಎಡ್ ಎಂಫಿಲ್ 08-06-2015 9482374274
15 ವಿನೋದ ಕುಮಾರಿ ಹೆಚ್ ವಿ ಉಪನ್ಯಾಸಕರು ಬಿ ಎಂ ಎ ಎಂ ಎಡ್ 01-08-2018 9844518893
16 ಜ್ಯೋತಿ ಕುಮಾರಿ ಕೆ ವಿ ಉಪನ್ಯಾಸಕರು ಬಿ ಎಂ ಎ ಎಂ ಎಡ್ 29-09-2018 9449363323
17 ಜಯಮ್ಮ ಎಲ್ ಉಪನ್ಯಾಸಕರು ಬಿ ಎಂ ಎ ಬಿಎಡ್ 01-10-2018 9980095895
18 ಶಶಿಕಲಾ ಬಿ ಹೆಚ್ ಉಪನ್ಯಾಸಕರು ಬಿ ಎಂ ಎ ಎಂ ಎಡ್ 01-10-2018 9611689035
19 ಶಕುಂತಳ ಎನ್ ಕೆ ಉಪನ್ಯಾಸಕರು ಬಿ ಎಂ ಎ ಬಿಎಡ್ 16-02-2021 6360060411
20 ಮಂಜಪ್ಪ ಆರ್ ಉಪನ್ಯಾಸಕರು ಬಿ ಎಂಎಸ್ಸಿ ಎಂಎಡ್  31-05-2019 9113289595
21 ನವೀದಾ ಖಾನಂ ಉಪನ್ಯಾಸಕರು ಬಿ ಎಂಎಸ್ಸಿ ಎಂಎಡ್  ಪಿ ಹೆಚ್ ಡಿ 29-07-2020 9008516601
22 ಅಶ್ವಿನ್ ಸಿ ಆರ್ ಉಪನ್ಯಾಸಕರು ಬಿ ಎಂಎಸ್ಸಿ ಎಂಎಡ್   09-12-2019 9481091045
23 ಲೀಲಾವತಿ ಉಪನ್ಯಾಸಕರು ಬಿ ಎಂಎಸ್ಸಿ ಬಿಎಡ್ 20-08-2020 9008515467
24 ವಿಘ್ನೇಶ್ವರಪ್ಪ ಹೆಚ್ ಪಿ ದೈ ಶಿ ಉಪನ್ಯಾಸಕರು ಬಿ ಬಿಎ ಬಿಪಿಎಡ್    
25 ಖಾಲಿಹುದ್ದೆ ಉಪನ್ಯಾಸಕರು ಬಿ      
26 ಖಾಲಿಹುದ್ದೆ ವೃತ್ತಿ ಶಿಕ್ಷಕರು ಸಿ      
27 ಸುಬ್ರಹ್ಮಣ್ಯ ಎಂ ರಾಜ್ಯ ಲೆಕ್ಕಾಧೀಕ್ಷಕರು (ನಿಯೋಜನೆ) ಸಿ ಎಂ ಎಲ್ ಐ ಎಸ್ ಸಿ 24-11-2020 9449052025
28 ಸೈಮನ್ ಮರಿರಾಜ್ ಅಧೀಕ್ಷಕರು ಸಿ ಬಿಕಾಂ 25-09-2020 7483930188
29 ವಾಸು ಎಂ ಅಧೀಕ್ಷಕರು ಸಿ ಬಿಎ 05-10-2020 9986282589
30 ಶಶಿಕಲ ಟಿ ಆರ್ ಗ್ರಂಥಪಾಲಕರು ಸಿ ಬಿಕಾಂ 22-12-2020 6361400390
31 ಖಾಲಿಹುದ್ದೆ ಶೀಘ್ರ ಲಿಪಿಗಾರರು ಸಿ      
32 ಹನುಮಂತನಾಯ್ಕ ಕೆ ಪ್ರಥಮ ದರ್ಜೆ ಸಹಾಯಕರು ಸಿ ಬಿಎ ಬಿಎಡ್ 11-12-2020 9741956314
33 ಜಮೀಲ್ ಅಹಮದ್ ಖಾನ್ ಪ್ರಥಮ ದರ್ಜೆ ಸಹಾಯಕರು ಸಿ ಬಿಎ 31-10-2008 9945455378
34 ಶೋಭ ಕೆ ಪ್ರಥಮ ದರ್ಜೆ ಸಹಾಯಕರು ಸಿ ಪಿಯುಸಿ 04-08-2007 9663951646
35 ನಾಗೇಂದ್ರ ಹೆಚ್ ಎಸ್ ಪ್ರಥಮ ದರ್ಜೆ ಸಹಾಯಕರು ಸಿ ಪಿಯುಸಿ 28-11-2019 9482208514
36 ಓಂಪ್ರಕಾಶ್ ಎಂ ಪಿ ಪ್ರಥಮ ದರ್ಜೆ ಸಹಾಯಕರು ಸಿ ಬಿಎ 12-12-2014 9916364833
37 ಮನೋಹರ್ ಕೆ ಎನ್ ತಾಂತ್ರಿಕ ಸಹಾಯಕರು ಸಿ ಪಿಯುಸಿ 01-02-2013 9844424588
38 ಸುನೀಲ್ ಕುಮಾರ್ ಬಿ ಕೆ ಅಂಕಿ ಅಂಶ ಸಹಾಯಕರು ಸಿ ಪಿಯುಸಿ 13-07-2017 8277308145
39 ಶರಾವತಿ ಡಿ ದ್ವಿತೀಯ ದರ್ಜೆ ಸಹಾಯಕರು ಸಿ ಎಸ್ ಎಸ್ ಎಲ್ ಸಿ 16-08-2019 9741676777
40 ಸುಬ್ರಹ್ಮಣ್ಯ ಕೆ ಎನ್ ದ್ವಿತೀಯ ದರ್ಜೆ ಸಹಾಯಕರು ಸಿ ಎಸ್ ಎಸ್ ಎಲ್ ಸಿ 01-03-2008 789273624
41 ಶೈಲಜಾ ಬಿ ಹೆಚ್ ದ್ವಿತೀಯ ದರ್ಜೆ ಸಹಾಯಕರು ಸಿ ಎಸ್ ಎಸ್ ಎಲ್ ಸಿ 05-06-2014 9980251621
42 ಹರ್ಷ ಹೆಚ್ ದ್ವಿತೀಯ ದರ್ಜೆ ಸಹಾಯಕರು ಸಿ ಪಿಯುಸಿ 01-08-2015 9902678171
43 ಮಂಜುನಾಥ ಹೆಚ್ ಒ ವಾಹನ ಚಾಲಕರು ಸಿ ಜೆಒಡಿಸಿ 06-08-2019 9164013355
44 ಮಂಜುಳ ಪ್ರಯೋಗ ಶಾಲಾ ಸಹಾಯಕರು ಸಿ 7 ನೇ ತರಗತಿ 32-07-2010 7899186499
45 ಬಸವರಾಜ್ ಎಂ ಹೆಚ್ ಗ್ರೂಪ್ 'ಡಿ' ಡಿ 9 ನೇ ತರಗತಿ 18-08-1999  
46 ಖಾಲಿಹುದ್ದೆ ಗ್ರೂಪ್ 'ಡಿ' ಡಿ      
47 ಲಲಿತಮ್ಮ ಕೆ ಹೆಚ್ ಗ್ರೂಪ್ 'ಡಿ' ಡಿ ಎಸ್ ಎಸ್ ಎಲ್ ಸಿ 21-02-2006 9663092516
48 ಖಾಲಿಹುದ್ದೆ ಗ್ರೂಪ್ 'ಡಿ' ಡಿ      
49 ಅರುಣ್ ಕುಮಾರ್ ಹೆಚ್ ಎಂ ಗ್ರೂಪ್ 'ಡಿ' ಡಿ 9 ನೇ ತರಗತಿ 23-03-2015 8867997451
50 ಖಾಲಿಹುದ್ದೆ ಗ್ರೂಪ್ 'ಡಿ' ಡಿ      

ದಿನಾಂಕ 01-04-2021 ರಲ್ಲಿದ್ದಂತೆ

ಇತ್ತೀಚಿನ ನವೀಕರಣ​ : 17-04-2021 02:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಶಿವಮೊಗ್ಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080